Tag: short story

ಮಾರಮ್ಮನ ಒಡವೆ

(ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ) ಲೇ ಈರ, ಹೊತ್ತು ಏರ್ತಾ ಬಂದ್ರೂ ಗುಡ್ಲು ಬಿಟ್ಟು ಬರಾಕಾಗಲ್ಲೇನೋ. ನಿನ್ನೆಯಿಂದ ಹೊಯ್ಕಂಡಿದೀನಿ. ಹೊತ್ತಿಗ್ ಮುಂಚೆ ಹಾರು ಕಟ್ರೋ ಅಂತ. ಇನ್ನೂ ಹೆಂಡ್ತಿ ಮಗ್ಲು ಬಿಟ್ಟು ಎದ್ದಿಲ್ಲೇನೋ’ ಗೌಡ ಅಷ್ಟು ಕೂಗಿದ್ರೂ ಕೇರಿ ಬೀದೀಲಿ ಯಾವ ಮಿಸುಕಾಟವೂ ಕಾಣದೆ ಅವನ ಸಿಟ್ಟು ಇನ್ನೂ ಜಾಸ್ತಿಯಾಯಿತು. ‘ಎಲ್ಲಿ ಹಾಳಾಗಿ ಹೋದ್ರೋ …. ತಿಂದ್ ಜಾಸ್ತಿಯಾದ್ರೆ ಹಿಂಗೇ ಅಲ್ವಾ’ ಅಂತಾ ಬುಸುಗುಡುತ್ತಾ ಗೌಡ, ಈರನ ಗುಡ್ಲ ಹತ್ರ ಬಂದ. ರಾತ್ರಿಯ ಮುಸುರೆ ಚೆಲ್ಲಾಕೆ

Continue reading