Category: ನನಗೆ ಅನಿಸಿದ್ದು

ಕಂತೆ

“ಕಂತೆ” ಕಥಾ ಸಾಗರದಲ್ಲಿ ಪ್ರತಿಯೊಂದು ಕಥೆಯೂ ಒಂದೊಂದು ಅಲೆಗಳಿದ್ದಂತೆ. ಸಮುದ್ರ ತನ್ನ ಒಡಲ ನೀರನ್ನು ತುಳುಕಿ ಚೆಲ್ಲುತ್ತದೆಯೇನೋ ಎಂಬಂತೆ ಭೋ‍ರ್ಗರೆಯುತ್ತದೆ. ಅಲೆಗಳ ಅಬ್ಬರದಿಂದ ಉಕ್ಕಿದ ನೀರನ್ನು ಮತ್ತೆ ತನ್ನ ಒಡಲಿಗೆ ತುಂಬಿಸುತ್ತಾ, ಆ ಒಡಲ ಭಾರಕ್ಕೊ ಏನೋ ತೀರಕ್ಕೆ ಬಂದು ಅಪ್ಪಳಿಸುತ್ತಾ,  ತನ್ನಿರವು ತೋರಿಸಲು ಸದ್ದು ಮಾಡುವಂತೆ ಈ ಕಥೆಗಳೂ ಸದಾ ಸದ್ದು ಮಾಡುತ್ತಾ ಸಮಾಜವನ್ನು ಎಚ್ಚರಿಸುತ್ತಿರುತ್ತವೆ.          ಕಥೆಗಳ ಪ್ರಕಾರವನ್ನು ಓದಬೇಕು ಎನ್ನುವ ತುಡಿತ ಬಂದಾಗಲೆಲ್ಲಾ ನನಗೆ ಬಹಳ ಸಾರಿ ಯಾವ ರೀತಿಯ ಕಥೆಗಳನ್ನು ಆಯ್ಕೆ

Continue reading

ನಾಳೆಯನ್ನು ಗೆದ್ದವನು: ಕಥಾ ವಿಮರ್ಶೆ‌ ಲೇಖಕರು: ನಾಗೇಶ್ ಕುಮಾರ್

ಇ ವಿಮರ್ಶೆ: ನಾಳೆಯನ್ನು ಗೆದ್ದವನು ಲೇಖಕರು: ನಾಗೇಶ್‌ ಕುಮಾರ್.‌ ವೈಜ್ಞಾನಿಕ ಹಾಗೂ ಪತ್ತೇದಾರಿ ಕಾದಂಬರಿಗಳ ಲೇಖಕರು. ಇವರ ನಾಳೆಯನ್ನು ಗೆದ್ದವನು ಎನ್ನುವ ವೈಜ್ಞಾನಿಕ ಹಿನ್ನಲೆಯ ಕಾದಂಬರಿಯು ಇಂಗ್ಲೀಷ್‌ ಆವೃತ್ತಿಯಲ್ಲಿ ‘Time Renewed’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ ಎಂದಿದ್ದಾರೆ. ಅದನ್ನೂ ಒಮ್ಮೆ ಓದಬೇಕು. ಇದೇ ಲೇಖಕರ ಹಿಮಜಾಲ, ಕರಾಳ ಗರ್ಭ ಕಾದಂಬರಿಗಳನ್ನು ಓದುವ ಕುತೂಹಲ ಹೆಚ್ಚಿದೆ. ಅವುಗಳ ವಿಮರ್ಶೆಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ.  ಅನುಪಮಾಳನ್ನು ಭಯೋತ್ಪಾದಕರ ಧಾಳಿಯಲ್ಲಿ ಕಳೆದುಕೊಂಡ ಅಭಿಮನ್ಯು, ಅವಳ ನೆನಪಿನಿಂದ ಹೊರಬರಲಾಗದೆ ಒದ್ದಾಡುತ್ತಿರುತ್ತಾನೆ. ತಾನು ಗುಪ್ತಚಾರ

Continue reading

ಇಂದಿನ ಓದು “ನಿಗೂಢ ನಾಣ್ಯ”

ವಿಟ್ಟಲ್‌ ಶೆಣೈ ರವರ “ನಿಗೂಢ ನಾಣ್ಯ” ಎನ್ನು ಕಾದಂಬರಿ ಓದಿ ಮುಗಿಸಿದೆ. ಕಾದಂಬರಿಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಮತ್ತು ಒಂದೇ ಓದಿಗೆ ಓದಿಸಿಕೊಳ್ಳುವ ಕುತೂಹಲಕಾರಿ ವಿವರಣೆ ತುಂಬಿರುವ ಕಥೆ. ಈಗ ಬಹಳವಾಗಿ ಚಾಲ್ತಿಯಲ್ಲಿರುವ‌ ಹೊಸ ಧನ ವಿನಿಮಯದ ಬಿಟ್‌ ಕಾಯಿನ್ ಬಳಕೆಯ ಬಗ್ಗೆ ಬೆಳಕು ಚೆಲ್ಲುವ ಹಾಗೂ ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕಾದ ಅಂಶಗಳು ಈ ಕಥೆಯಲ್ಲಿವೆ.ಧನ ಮತ್ತು ಹಣದ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ಹಾಗೂ ಬಹಳ ಸರಳವಾಗಿ ವಿವರಿಸಲಾಗಿದೆ. ಧನ ತನ್ನ ಖರೀದಿಯ ಸಾಮರ್ಥ್ಯ ಹಿಗ್ಗಿಸಿಕೊಂಡರೆ, ಹಣ

Continue reading

ಕರೋನ: ನಮಗೆ ಕಲಿಸಿದ್ದೇನು ?

ಇತ್ತೀಚಿನ ದಿನಗಳಲ್ಲಿ ಕರೋನ ವೈರಸ್‌ ನ ಕಾರಣದಿಂದ ನಡೆಯುತ್ತಿರುವ ನಾಗರೀಕ ಜಗತ್ತಿನ ಲಾಕ್‌ ಔಟ್‌ ನಿಂದಾಗಿ, ಪ್ರಕೃತಿಯಲ್ಲಿ ಬಂದಿರುವ ಬದಲಾವಣೆ ಅಚ್ಚರಿ ಮೂಡಿಸುತ್ತಿದೆ. ಊರಿನ ಚನ್ನಕೇಶವ ದೇವಸ್ಥಾನ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತಿತ್ತು. ಜನರಿಲ್ಲದ ದೇವಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

MYLANG BOOKS- ಓದಿನಲ್ಲಿ ತರುತ್ತಿದೆ ಹೊಸತನ

ಈ ಭಾನುವಾರ 01-03-2020ರ ಬೆಳಿಗ್ಗೆ 10.30 ಗಂಟೆಗೆ Indian Institute of World cultureನ ಸಭಾಂಗಣದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಬಗ್ಗೆ ಸುಮಾರು ಮೂರು ತಿಂಗಳಿಂದ ಫೇಸ್‍ಬುಕ್‍ನಲ್ಲಿ, ಟ್ವಿಟರ್‍ನಲ್ಲಿ ಮಾತನಾಡಲಾಗುತ್ತಿತ್ತು. ನೆಟ್ಟಿಗರೂ ಕುತೂಹಲದಿಂದ ಎದುರು ನೋಡುವಂತೆ, ಆಯೋಜಕರು, ಈ ಕಾರ್ಯಕ್ರಮದ ಬಗ್ಗೆ ಅನೇಕ ರಸ ಪ್ರಶ್ನೆಗಳನ್ನು ಕೇಳುತ್ತಾ, ಕ್ವಿಜ್ ಸ್ಪರ್ಧೆಯನ್ನು ನಡೆಸುತ್ತಾ ಜನರ ತವಕ ಹೆಚ್ಚಾಗುವಂತೆ ಮಾಡಿದ್ದರು.