ರೂಢಿ

ನವಕರ್ನಾಟಕ ಪಬ್ಲಿಕೇಷನ್ಸ್‌ ರವರಿಂದ

ನಾವು ಕೆಲವೊಂದು ಕೆಲಸವನ್ನು ಮಾಡಬೇಕೆಂದು ಮನಸ್ಸು ಮಾಡುತ್ತೇವೆ. ಆದರೆ ಮಾಡುವುದಿಲ್ಲ. ಕೆಲವೊಂದು ಕೆಲಸವನ್ನು ಇನ್ನು ಮುಂದೆ ಮಾಡಲೇ ಬಾರದೆಂದು ನಿರ್ಧರಿಸುತ್ತೇವೆ, ಆದರೆ ಬಿಡುವುದೇ ಇಲ್ಲ. ಯಾಕೆ ಹೀಗೆ ?
ಬೆಳಗಿನ ಜಾವದಲ್ಲಿ ಏಳಬೇಕೆಂದು ನಿರ್ಧಾರ ಮಾಡುವರು ನಾವೇ ಆದರೆ, ಬೆಳಿಗ್ಗೆ ಅಲಾರಾಂ ಹೊಡೆದುಕೊಳ್ಳುತ್ತಿದ್ದರೂ ಅದನ್ನು ನಿಲ್ಲಿಸಿ, ಇನ್ನೆರೆಡು ನಿಮಿಷ ಮಲಗಿಕೊಳ್ತೇನೆ ಎಂದು ನಿದ್ದೆ ಮಾಡುವ ಮನಸ್ಸು ಮಾಡುವರು ನಾವೇ ಅಲ್ಲವೇ
ನಾವು ಪ್ರಗತಿಯ ಮೆಟ್ಟ್ಟಿಲನ್ನು ಏರಬೇಕೆಂದರೆ ಏರಬೇಕಾದ ಏಣಿಯು ನಾವೆಣಿಸಿದ ಗುರಿಯಡೆಗೆ ಇರಬೇಕು ಮತ್ತು ಏಣಿಯನ್ನು ಭದ್ರವಾದ ಗೋಡೆಗೆ ಆನಿಸಿರಬೇಕು. ಇಲ್ಲವಾದಲ್ಲಿ ನಾವೇರುವ ಏಣಿಯೇ ಜಾರಿ ಬೀಳಬಹುದು, ಇಲ್ಲವೇ ಗುರಿಯೇ ಬೇರೆಯಾಗಿಬಿಡಬಹುದು.


ಮನುಷ್ಯನ ಮಾನಸಿಕ ನಡವಳಿಕೆಗಳ ಮೇಲೆ ಆಧಾರವಾದ ಸರ್ವಕಾಲಿಕ, ಸಾರ್ವತ್ರಿಕ ತತ್ವಗಳನ್ನು ಒಂದು ಚೌಕಟ್ಟಿನಲ್ಲಿ ಅಡಕಗೊಳಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಹೊಸ ಪುಸ್ತಕ ಸಧ್ಯದಲ್ಲಿಯೇ ಮಾರುಕಟ್ಟೆಗೆ….


ರೂಢಿ… ಬದಲಿಸುವುದು ಹೇಗೆ
ಇದು ಜೀವನ ರೂಪಿಸುವ ಬಗೆ.